ಧೋನಿಯ ಅದ್ಭುತ ಬ್ಲೈಂಡ್ ರನೌಟ್, ವಿಡಿಯೋ ವೈರಲ್

Fri 28th Oct, 2016 Author: Kumar Prince Mukherjee

ರಾಂಚಿ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ಅದ್ಭುತ ಸಾಧನೆಯೊಂದನ್ನು ಮಾಡಿದ್ದಾರೆ.

ಧೋನಿ ತವರಾದ ರಾಂಚಿಯಲ್ಲಿ ನಡೆದ ಪಂದ್ಯದ ವೇಳೆ 46ನೇ ಓವರ್ ನಲ್ಲಿ 34 ರನ್ ಗಳಿಸಿದ್ದ ನ್ಯೂಜಿಲೆಂಡ್ ಆಟಗಾರ ರಾಸ್ ಟೇಲರ್ ರನ್ ಪಡೆಯಲು ಓಡುತ್ತಿದ್ದರು. ಈ ವೇಳೆ ಧೋನಿ ವಿಕೆಟ್ ನಿಂದ 10 ಅಡಿ ದೂರದಿಂದ ಚೆಂಡನ್ನು ವಿಕೆಟ್ ಹೊಡೆದು ಅವರನ್ನು ರನೌಟ್ ಮಾಡಿದ್ದಾರೆ.ರನೌಟ್ ಮಾಡುವುದರಲ್ಲಿ ಏನು ವಿಶೇಷ ಅಂತಿರಾ. ವಿಕೆಟ್ ಗೆ ಬೆನ್ನು ಹಾಕಿ ನಿಂತರೂ ಧೋನಿ ಬಾಲ್ ಅನ್ನು ನೇರವಾಗಿ ವಿಕೆಟ್ ಗೆ ಬಡಿದಿದ್ದಾರೆ. ಈ ಸಾಧನೆಯನ್ನು ಬ್ಲೈಂಡ್ ರನೌಟ್ ಎಂದು ವರ್ಣಿಸಲಾಗಿದೆ. ಇದೀಗ ಧೋನಿಯ ಅದ್ಭುತ ಬ್ಲೈಂಡ್ ರನೌಟ್ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.