ವೈವಾಹಿಕ ಜೀವನದಿಂದ ಕ್ರಿಕೆಟ್ ನಿಂದ ದೂರವಾದಾಗ ಆತ್ಮಹತ್ಯೆಗೆ ಯತ್ನಿಸಿದ್ದೆ: ಮಾಜಿ ಕ್ರಿಕೆಟಿಗ

Wed 2nd Nov, 2016 Author: Kumar Prince Mukherjee

Duravadag Image

ಸಿಡ್ನಿ: ವೈವಾಹಿಕ ಜೀವನದಿಂದಾಗಿ ಕ್ರಿಕೆಕ್ ನಿಂದ ದೂರ ಉಳಿದಿದ್ದಾಗ ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಬರೆದುಕೊಂಡಿದ್ದಾರೆ. 

2007ರಲ್ಲಿ ಬ್ರಾಡ್ ಹಾಗ್ ಅವರ ವೈವಾಹಿಕ ಜೀವನ ಎಷ್ಟರಮಟ್ಟಿಗೆ ಹದಗೆಟ್ಟಿತ್ತೆಂದರೆ ಕ್ರಿಕೆಟ್ ನಿಂದ ನಿವೃತ್ತಿಯಾಗದೆ ಬೇರೆ ದಾರಿಯೇ ಇರಲಿಲ್ಲ ಎಂದು ಜೀವನ ಚರಿತ್ರೆ ದಿ ರಾಂಗ್ ಯುಎನ್ ನಲ್ಲಿ ಬರೆದುಕೊಂಡಿದ್ದಾರೆ. 

ತಮ್ಮ ನೆಚ್ಚಿನ ಕ್ರಿಕೆಟ್ ನಿಂದ ದೂರವಾದಾಗ ಮದ್ಯಕ್ಕೆ ದಾಸನಾದೆ. ಕೆಲಸದಲ್ಲೂ ನೆಮ್ಮದಿ ಇರಲಿಲ್ಲ. ಹೀಗಾಗಿ ಆ ದಿನಗಳಲ್ಲಿ ಕಾರನ್ನು ಪೋರ್ಟ್ ಬೀಚ್ ನಲ್ಲಿ ಪಾರ್ಕ್ ಮಾಡಿ ವಾಕಿಂಗ್ ಮಾಡುತ್ತಿದ್ದೆ. ಒಂದೊಮ್ಮೆ ಸಮುದ್ರದ ಕಡೆಗೆ ದಿಟ್ಟಿಸುತ್ತಾ ಆಳದವರೆಗೂ ಈಜುತ್ತೇನೆ. ಎಲ್ಲಿಯವರೆಗೂ ಸಾಧ್ಯವೋ ಅಲ್ಲಿಯವರೆಗೂ ಈಜುತ್ತೇನೆ. ಒಂದು ವೇಳೆ ಮರಳಲು ಸಾಧ್ಯವಾದಗೆ ಇದ್ದರೆ ಅಲ್ಲ ಪ್ರಾಣ ಕಳೆದುಕೊಳ್ಳುವ ಯೋಚನೆಯನ್ನು ಮಾಡಿದ್ದೆ ಎಂದು ಬರೆದುಕೊಂಡಿದ್ದಾರೆ