ವಿಶ್ವದಾಖಲೆ ಬರೆದ ಧೋನಿ

Mon 24th Oct, 2016 Author: Kumar Prince Mukherjee

ಮೊಹಲಿ : ಟೀಂ ಇಂಡಿಯಾದ ನಾಯಕ ಎಂಎಸ್ ಧೋನಿ ಅವರು ಏಕದಿನ ಕ್ರಿಕೆಟ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮತ್ತೊಂದು ವಿಕ್ರಮ ಸಾಧಿಸಿದ್ದಾರೆ. ಅತ್ಯಂತ ತ್ವರಿತಗತಿಯಲ್ಲಿ ಸ್ಟಂಪಿಂಗ್ ಮಾಡುವ ಮೂಲಕ 151 ವಿಕೆಟ್ ಉರುಳಿಸಿದ್ದು ವಿಶ್ವದಾಖಲೆಯಾಗಿದೆ.

ಪಂದ್ಯದ ಸ್ಕೋರ್ ಕಾರ್ಡ್

ಒಟ್ಟಾರೆ 444 ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಿಂದ ಧೋನಿ ಅವರು 151 ಸ್ಟಂಪಿಂಗ್ಸ್ ಸಾಧಿಸಿದ್ದಾರೆ. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾನುವಾರದಂದು ಮೊಹಾಲಿಯಲ್ಲಿ ಕೂಡಾ ಧೋನಿ ಕೈಚಳಕ ಎಲ್ಲರನ್ನು ಸೆಳೆಯಿತು

ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ಬೌಲಿಂಗ್ ನಲ್ಲಿ ಲೂಕ್ ರಾನ್ಕಿ ಅವರನ್ನು ಧೋನಿ ಅತ್ಯಂತ ತ್ವರಿತಗತಿಯಲ್ಲಿ ಸ್ಟಂಪ್ ಔಟ್ ಮಾಡಿದರು. 35 ವರ್ಷ ವಯಸ್ಸಿನ ಧೋನಿ ಅವರ ವಿಕೆಟ್ ಕೀಪಿಂಗ್ ಬಗ್ಗೆ ಮೂಗೆಳೆಯುತ್ತಿದ್ದವರಿಗೆ ಈ ದಾಖಲೆ ಸಾಧನೆಗೆ ಹಿಡಿದ ಕನ್ನಡಿಯಾಗಲಿದೆ.