ಅನಿಲ್ ಕುಂಬ್ಳೆಯನ್ನು ನರೇಂದ್ರ ಮೋದಿ ಹೊಗಳಿದ್ದೇಕೆ?

Thu 10th Nov, 2016 Author: Kumar Prince Mukherjee

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನೋಟುಗಳ ನಿಷೇಧ ಆದೇಶಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೋದಿ ಅವರ ಕ್ರಮವನ್ನು ಮೆಚ್ಚಿ ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಅವರು ಟ್ವೀಟ್ ಮಾಡಿದ್ದರು. ಕುಂಬ್ಳೆ ಟ್ವೀಟ್ ಗೆ ಪ್ರಧಾನಿ ಅವರು ಪ್ರತಿಕ್ರಿಯಿಸಿ, ಹೊಗಳಿದ್ದು ವಿಶೇಷವಾಗಿದೆ. ಮಂಗಳವಾರ (ನವೆಂಬರ್ 8) ರ ಮಧ್ಯರಾತ್ರಿಯಿಂದಲೇ ರೂ.500, ರೂ.1000 ನೋಟುಗಳು ರದ್ದಾಗಲಿವೆ. ಕಪ್ಪು ಹಣ ಮತ್ತು ನಕಲಿ ಹಣಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 500 ಹಾಗೂ 2000 ರುಇ ಮುಖಬೆಲೆಯ ಹೊಸ ನೋಟುಗಳು ನವೆಂಬರ್ 10ರಿಂದ ಜಾರಿಗೆ ಬರಲಿವೆ ಎಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ಮೋದಿ ಹೇಳಿದ್ದರು.