ರವಿಚಂದ್ರನ್ ಅಶ್ವಿನ್ ಮುರಿದ ಟೆಸ್ಟ್ ದಾಖಲೆಗಳ ಪಟ್ಟಿ

Sat 22nd Oct, 2016 Author: Kumar Prince Mukherjee

ಇಂದೋರ್: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಹತ್ತು ಹಲವು ದಾಖಲೆಗಳನ್ನು ಕೂಡಾ ಮುರಿದಿದ್ದಾರೆ. ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 13 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠರೆನಿಸಿದ ಅಶ್ವಿನ್ ಅವರ ಸ್ಪಿನ್ ಮೋಡಿಯಿಂದ ಕಿವೀಸ್ ಹೊರ ಬರಲು ಸಾಧ್ಯವಾಗಿಲ್ಲ. ಸರಣಿಯಲ್ಲಿ ಭಾರತ 3-0 ಕ್ಲೀನ್ ಸ್ವೀಪ್ ಮಾಡಲು ಅಶ್ವಿನ್ ಕೊಡುಗೆ ಹೆಚ್ಚಾಗಿತ್ತು. ಒಟ್ಟಾರೆ ಸರಣಿಯಲ್ಲಿ 27 ವಿಕೆಟ್ ಗಳನ್ನು ಗಳಿಸಿದ ಅಶ್ವಿನ್ ಇನ್ನೊಂದು ಬದಿಯಲ್ಲಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಉತ್ತಮ ಸಾಥ್ ನೀಡಿದರು. ಇಂದೋರ್ ಟೆಸ್ಟ್ ಪಂದ್ಯದಲ್ಲೇ ಮೊದಲ ಇನಿಂಗ್ಸ್ ನಲ್ಲಿ 81ಕ್ಕೆ 6 ಮತ್ತು 2ನೇ ಇನಿಂಗ್ಸ್ ನಲ್ಲಿ 59ಕ್ಕೆ 7 ಗಳಿಸಿ ತಮ್ಮ ವಿಕೆಟ್ ಬೇಟೆ ಮುಂದುವರೆಸಿದರು. ಜತೆಗೆ ಅನೇಕ ದಾಖಲೆಗಳನ್ನು ಕೂಡಾ ಧ್ವಂಸಗೊಳಿಸಿದರು.