ಅಶ್ವಿನ್ ವಿಶ್ವ ನಂ.1 ಬೌಲರ್

Sat 22nd Oct, 2016 Author: Kumar Prince Mukherjee

ದುಬೈ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 27 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್ ಅಶ್ವಿನ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ ಹಾಗೂ ಆಲ್ರೌಂಡರ್ ರ್ಯಾಂಕಿಂಗ್ ನಲ್ಲೂ ನಂ.1 ಪಟ್ಟಕ್ಕೇರಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಇಂದೋರ್ ನಲ್ಲಿ ಅಂತಿಮ ಟೆಸ್ಟ್ ಪಂದ್ಯದಲ್ಲಿ 140 ರನ್ ಸಿಡಿಸಿದ್ದ ಅಶ್ವಿನ್ 13 ವಿಕೆಟ್ ಗಳನ್ನು ಪಡೆದು ಸರಣಿಯಲ್ಲಿ ಒಟ್ಟಾರೆ 27 ವಿಕೆಟ್ ಪಡೆಯುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನದಲ್ಲಿದ್ದ ಅಶ್ವಿನ್ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ ಸನ್ ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಟೆಸ್ಟ್ ನಲ್ಲಿ 900 ಅಂಕಗಳನ್ನು ಕಲೆ ಹಾಕಿದ ಸಾಧನೆಯನ್ನೂ ಅಶ್ವಿನ್ ಮಾಡಿದ್ದಾರೆ.39 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಶ್ವಿನ್ 220 ಗರಿಷ್ಠ ವಿಕೆಟ್ ಸಂಪಾದಿಸಿದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.